ಬ್ರಿಜ್ ಭೂಷಣ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ

ManjuHamapura
0
ಮೈಸೂರು: ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ,ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ರಿಂದ‌ ಲೈಂಗಿಕ ಕಿರುಕುಳಕ್ಕೆ ಒಳಗಾದ ಕುಸ್ತಿ ಪಟುಗಳಿಗೆ ನ್ಯಾಯ ಒದಗಿಸಿ, ತಪ್ಪಿತಸ್ಥರಿಗೆ ಶಿಕ್ಷೆಗೆ  ಒತ್ತಾಯಿಸಿ ಜನತಂತ್ರ ಜಾಗೃತಿ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ರಾಮಸಾಮಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಂತರ ಕೇಂದ್ರ ಸರ್ಕಾರ ಹಾಗೂ ಬ್ರಿಜ್ ಭೂಷಣ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪ್ರಗತಿಪರ ಸಂಘಟನೆಯ ಮುಖಂಡ ಉಗ್ರನರಸಿಂಹೇಗೌಡ ಮಾತನಾಡಿ, ಆಲ್ ಇಂಡಿಯಾ ಕಿಸಾನ್ ಮೋರ್ಚಾ ಕರೆಗೆ ಓಗೊಟ್ಟು ಇಂದು ಎಲ್ಲಾಜನಪರ ಸಂಘಟನೆಗಳು ಭಾರತೀಯ ಮಹಿಳಾ ಕುಸ್ತಿಪಟುಗಳ ಮೇಲೆ ಲೈಗಿಂಕ ದೌರ್ಜನ್ಯ ಎಸಗಿರುವ ಭಾರತದ ಕುಸ್ತಿ ಫೇಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೇ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಬ್ರಿಜ್‌ಭೂಷಣ್ ಮೇಲೆ ಎಫ್‌ಐಆರ್ ದಾಖಲಿಸಲು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಬೇಕಾಗಿದ ಪರಿಸ್ಥಿತಿ ಬಂದಿದೆ ಎಂದರೆ ಭಾರತದಲ್ಲಿ÷ ಕಾನೂನು ವ್ಯವಸ್ಥೆ ಯಾವ ರೀತಿ ಇದೆ ಎಂದು ಯೋಚಿಸ ಬೇಕಾಗುತ್ತದೆ ಎಂದರು.
ವಿಶ ಮಟ್ಟದಲ್ಲಿಭಾರತದ ಕುಸ್ತಿಯನ್ನು ವಿಸ್ತರಿಸಬೇಕಾದ ಕುಸ್ತಿ ಫೆಡರೇಷನ್ ಅಧ್ಯಕ್ಷ ಅವಕಾಶಕ್ಕಾಗಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾರೆ ಇಂತಹವರ ಪರ ನಿಂತಿರುವುದು ಧಾರ್ಮಿಕ ಮುಖಂಡರು ಅನಿಸಿಕೊಂಡವರು. ಅಂದು ಹಿಂದೂ ಕೋಡ್ ಬಿಲ್ ಅನ್ನು ವಿರೋಧಿಸಿದವರೆ ಇಂದು ಬ್ರಿಜ್‌ಭೂಷಣ್ ಪರ ನಿಂತಿದ್ದಾರೆ ಎಂದರು.

ಮಹಿಳಾ ಸಾತಂತ ಮಹಿಳಾ ಹಕ್ಕುಗಳನ್ನು ನಿರಾಕರಿಸಿದವರು ಬ್ರಿಜ್ ಭೂಷಣ್ ಪರ ನಿಂತಿದ್ದಾರೆ. ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡುವವರು ಇಂದು ಆರೋಪಿಯ ಪರ ನಿಂತಿದ್ದಾರೆ. ಈ ವಿಷಯಗಳೆಲ್ಲಾ÷ ತಿಳದಿರು ಪ್ರಧಾನಿಗಳು ಯಾವುದೇ ಕ್ರಮ ಕೈಗೊಂಡಿಲ್ಲ÷ ಆರಿಂದ ರಾಷಪತಿಗಳು ಈ ವಿಷಯದಲ್ಲಿ÷ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು.
ನಂತರ  ಜನತಂತ್ರ ಜಾಗೃತಿ ವೇದಿಕೆ ಹಾಗೂ ಇತರ ಪ್ರಗತಿಪರ ಸಂಘಟನೆಗಳೆಲ್ಲಾ ಸೇರಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆಂಪುಗೌಡ,ಪ್ರೊ.ಶಬ್ಬೀರ್ ಮುಸ್ತಫಾ, ಚೋರನಹಳ್ಳಿ ಶಿವಣ್ಣ, ಪ್ರೊ.ಕಾಳಚನ್ನೇಗೌಡ, ಹೊಸಕೋಟೆಬಸವರಾಜು, ಎಐಡಿವೈಒ, ಎಐಐಎಂಎಸ್‌ನ ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ÷ ಉಪಸ್ಥಿತರಿರು.

Post a Comment

0Comments
Post a Comment (0)