ಮೈಸೂರು: ಮುಂಬರುವ ಲೋಕಸಭಾ ಚುನಾವಣೆಗೆ ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಕಾಂಗ್ರೆಸ್ ಮಾಜಿ ಶಾಸಕ ವಾಸು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪತ್ರಕರ್ತ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀರಿಕ್ಷೆ ಇಟ್ಟುಕೊಳ್ಳುದರಲ್ಲಿ ತಪ್ಪೇನಿದೆ? ಟಿಕೆಟ್ ಕೊಟ್ಟರೆ ಸಮರ್ಥವಾಗಿ ಸ್ಪರ್ಧಿಸುತ್ತೇನೆ. ಇಂದು ಪಾರ್ಟಿಯಲ್ಲಿ ಸೀನಿಯರ್ ಜೂನಿಯರ್ ಅನ್ನೋ ಸಂಪ್ರದಾಯ ಇಲ್ಲ. ಕಾರ್ಯಕರ್ತರ ಮಾತುಗಳು ಯಾವ ಪಕ್ಷಗಳಲ್ಲೂ ಮುಖ್ಯವಾಗಿಲ್ಲ.
ಈ ಹಿಂದೆ ಪ್ರಚಂಡ ಬಹುಮತ ಪಡೆದಿದ್ದ ವೀರೇಂದ್ರ ಪಾಟೀಲ್ ಸರ್ಕಾರ ಕೇವಲ 11 ತಿಂಗಳಿಗೆ ಅಧಿಕಾರ ಕಳೆದುಕೊಂಡಿತ್ತು. ರಾಜಕಾರಣದಲ್ಲಿ ಹೀಗೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದರು.