ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಐಡಿವೈಒ ಧನ್ಯವಾದ

ManjuHamapura
0
ಮೈಸೂರು: ರಾಜ್ಯ ಸರ್ಕಾರದ ವಿವಿಧ ನಿಗಮಗಳ ನೇರ ನೇಮಕಾತಿಗೆ ವಿಧಿಸಿದ್ದ ಅರ್ಜಿ ಶುಲ್ಕದ ದರವನ್ನು ಮನವಿ ಮೇರೆಗೆ ಕಡಿತಗೊಳಿಸಿರುವುದಕ್ಕೆ ಅಖಿಲ‌ ಭಾರತ ಪ್ರಜಾತಾಂತ್ರಿಕ ಯುವಜನ ಸಂಘಟನೆ(ಎಐಡಿವೈಒ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದೆ‌.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿ ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಸ್.ಸುಮಾ ಮಾತನಾಡಿ,  ರಾಜ್ಯದ ಐದು ನಿಗಮಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ 700ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಜಿ ಆಹ್ವಾನಿಸಿದ್ದು, ಅತ್ಯಂತ ದುಬಾರಿ ಶುಲ್ಕವನ್ನು  ನಿಗದಿಪಡಿಸಲಾಗಿತ್ತು. ಈ ಪರೀಕ್ಷಾ ಅರ್ಜಿ ಶುಲ್ಕವನ್ನು ಕಡಿಮೆ ಮಾಡುವುದು ಸೇರಿದಂತೆ ಯುವಜನರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ನಮ್ಮ ಸಂಘಟನೆಯ  ರಾಜ್ಯ ಸಮಿತಿಯು ನಿಯೋಗವು ಇತ್ತೀಚಿಗೆ  ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿತ್ತು ಎಂದರು.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಪ್ರತಿ ಹುದ್ದೆಯ ಅರ್ಜಿಗೆ ರೂ.1000/- ನಿಗದಿ ಮಾಡಲಾಗಿತ್ತು. ಒಂದೊಮ್ಮೆ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಅತ್ಯಧಿಕ ಅರ್ಜಿ ಶುಲ್ಕವನ್ನು ಬರಿಸಬೇಕಾಗಿತ್ತು. ನಿರುದ್ಯೋಗಿ ಯುವಜನರಿಗೆ ಇದು ಅತ್ಯಂತ ಹೊರೆಯಾಗುವ ಕಾರಣ ಅರ್ಜಿ ಶುಲ್ಕ ಕಡಿಮೆ ಮಾಡಲು ಮನವಿ ಸಲ್ಲಿಸಲಾಗಿತ್ತು. ಈಗ ಅರ್ಜಿ ಶುಲ್ಕ ಕಡಿಮೆ ಮಾಡಿರುವುದರಿಂದ ತಕ್ಕಮಟ್ಟಿಗೆ ನಿರುದ್ಯೋಗಿ ಯುವ ಜನರ ಭಾರ ಕಡಿಮೆಯಾಗುತ್ತದೆ ಎಂದು ಮುಖ್ಯಮಂತ್ರಿಗಳಲ್ಲಿ ಕೋರಲಾಗಿತ್ತು ಎಂದು ತಿಳಿಸಿದರು.

ಈ ಬೇಡಿಕೆಗೆ ಸ್ಪಂದಿಸಿದ್ದ ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿಗಳ ಅರ್ಜಿ ಶುಲ್ಕವನ್ನು ಕಡಿಮೆ ಮಾಡಿ ಪರಿಷ್ಕರಿಸುವಂತೆ  ಆದೇಶವನ್ನು ಹೊರಡಿಸಿದೆ. ನಿರುದ್ಯೋಗಿ ಯುವಜನರ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಎಐಡಿವೈಒ ಯುವಜನ ಸಂಘಟನೆಯು ರಾಜ್ಯದ ಯುವಜನತೆಯ ಪರವಾಗಿ ಧನ್ಯವಾದ  ಸಲ್ಲಿಸುತ್ತದೆ ಎಂದರು.

Post a Comment

0Comments
Post a Comment (0)