ಮೈಸೂರು: ಪ್ರಗತಿಪರ ಚಿಂತಕರು ತಮ್ಮನ್ನು ಕೇವಲ ಕೋಮುವಾದ ವಿರೋಧಿ ಚಳವಳಿಗೆ ಸೀಮಿತವಾಗದೆ ಬಡವರ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ ಬಡತನ ಬಗ್ಗೆ ಹೆಚ್ಚು ಧ್ವನಿಯಾಗಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕಲಾಮಂದಿರದ ಶ್ರೀರಂಗ ವೇದಿಕೆಯಲ್ಲಿ ಆಯೋಜಿದ್ದ ವಿಚಾರವಾದಿ ಪ್ರೊ.ಕೆ.ರಾಮದಾಸ್ ಅವರ ಸ್ಮರಣಾರ್ಥ ಸಂವಾದ, ಪುಸ್ತಕ ಬಿಡುಗಡೆ ಹಾಗೂ ಲೇಖನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರೊ.ರಾಮದಾಸ್ ಅವರು ತಮ್ಮ ಚಿಂತನೆಗಳಿಂದ ಸಾಕಷ್ಟು ಜನರ ಮೇಲೆ ದೊಡ್ಡ ಪ್ರಭಾವ ಬೀರಿದವರು.ಯುಜವ ಸಮುದಾಯದ ಮೇಲೆ ಹೆಚ್ಚು ಭರವಸೆ ಇಟ್ಟುಕೊಂಡವರು.ತಮ್ಮ ವೈಚಾರಿಕ ದೃಷ್ಟಿಕೋನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸಕ್ಕೆ ಕೈಹಾಕಿದರು.ಅಂತರ್ ಜಾತಿ ವಿವಾಹಕ್ಕೆ ಪ್ರೋತ್‌ಸಾಹ ನೀಡಿ ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡುವ ಗುರಿಯೊಂದಿಗೆ ಮುನ್ನಡೆದವರು.ಇಂದು ನಾವೆಲ್ಲರೂ ಅವರ ವಿಚಾರಗಳನ್ನು ಮುಂದೆಕೊಂಡೊಯ್ಯುವ ಜವಾಬ್ದಾರಿ ನಮ್ಮೆಲರ ಹೆಗಲ ಮೇಲಿದೆ ಎಂದರು.
ಅನೇಕ ಹೋರಾಟಗಾರರು ರಾಮದಾಸ್ ಅವರಿಂದ ಪ್ರೇರಣೆ ಪಡೆದುಕೊಂಡಿದ್ದಾರೆ.ಆದರೆ, ಇಂದಿನ ಯುವಕರು ನಮಗೆ ಇಂತವರು ಪ್ರೇರಣೆ ಆಗಿದ್ದರು ಎಂದು ಹೇಳೀಕೊಳ್ಳಲು ಆಗುತ್ತಿಲ್ಲ. ಕಾರಣ ಅವರಿಗೆ ಪ್ರಗತಿರವಾಗಿ ಆಲೋಚನೆ ಮಾಡುವ ಮನಸ್ಸಿಲ್ಲ ಅಥವಾ ಪ್ರೇರೇಪಿಸುವವರಿಲ್ಲ.ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ವಿರುದ್ಧ ಒಂದು ಪೋಷ್ಟರ್ ಹಾಕಿದ ಮಾತ್ರಕ್ಕೆ ಯಾರೂ ಪ್ರಗತಿಪರ ಚಿಂತಕ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕದ ರಾಜಕೀಯ ಸಾಂಸ್ಕೃತಿ ಚಳವಳಿ ಪ್ರೇರಿತವಲ್ಲದ ಕಾರಣ ಪಕ್ಕದ ತಮಿಳುನಾಡು ಮತ್ತು ಕೇರಳದಲ್ಲಿ ದ್ರಾವಿಡ ಸಂಸ್ಕೃತಿ ಪ್ರಭಾವ ಭೀರಿದಷ್ಟು ಕರ್ನಾಟಕದಲ್ಲಿ ಬೀರಿಲ್ಲ. ಅಲ್ಲಿ ಪೆರಿಯರ್ ರಾಮಸ್ವಾಮಿ, ನಾರಾಯಣ ಗುರುರಂತಹ ಸಾಂಸ್ಕೃತಿ ನಾಯಕರು ಹುಟ್ಟಿಕೊಂಡ ಕಾರಣ ಅಲ್ಲಿನ ಜನರು ಇಂದಿಗೂ ಬಿಜೆಪಿ, ಆರ್‌ಎಸ್‌ಎಸ್‌ನಂತಹ ಸಂಘಟನೆಗಳು ನೆಲೆಯೂರಲು ಅವಕಾಶಕೊಟ್ಟಿಲ್ಲ. ನಮ್ಮಲಿ ಸ್ಥಳೀಯ ನಾಯಕತ್ವವನ್ನು ಬೆಳೆಸದೆ ಗುಜರಾತ್, ಬಿಹಾರ, ಉತ್ತರ ಪ್ರದೇಶದಂತಹ ರಾಜ್ಯಗಳಿಂದ ನಾಯಕರನ್ನು ಆಮದು ಮಾಡಿಕೊಳ್ಳುತ್ತಿದೇವೆ. ಅಲ್ಲದೇ ಅವರೇ ಕರ್ನಾಟಕದ ಕಾಂಗ್ರೆಸ್ ಗೆಲುವಿನ ರೂವಾರಿ ಎಂದು ಬಿಂಬಿಲಸಲಾಗುತ್ತಿದೆ ಎಂದು ಹೇಳಿದರು.
ಎಂಭತ್ತರ ದಶಕ ಚಳವಳಿ ಸುವರ್ಣ ಯುಗ.ಅಂದು ರೈತ ಚಳವಳಿ, ದಲಿತ ಚಳವಳಿ, ಕಾಗೂಡು ಸತ್ಯಾಗ್ರಹ, ಅರಸು ತಂದು ಪ್ರಗತಿಪರ ಕಾನುನುಗಳು, ಬಸಲಿಂಗಪ್ಪ ಬೂಸ ಚಳವಳಿಯನ್ನು ನೋಡಲು ಸಾಧ್ಯವಾಯಿತು.ಅದೇ ಸಮಯದಲ್ಲಿ ಕಾಂಗ್ರೆಸ್ ಮೈಮರೆತ ಕಾರಣ ಮತ್ತೆ ನೆಲಕಚ್ಚುವ ಹಂತ ತಲಪಿತು. ಇದರ ಲಾಭ ಪಡೆದ ಜನಸಂಘ ಅರಳು ಶುರುವಾಯಿತು. ಅದರಿಂದ ಇಂದಿನಿಂದಗೂ ಕಾಂಗ್ರೆಸ್ ಚೇತರಿಕೆಗೊಂಡಿಲ್ಲ. ಈ ಫಲಿತಾಂಶವೂ ಕೂಡ ಅಷ್ಟೇಕ್ಕೆ ಸೀಮಿತವೇ ಎಂದು ಯೋಚಿಸಬೇಕು.ಜನಸಾಮಾನ್ಯರ ತಮ್ಮ ಕಷ್ಟ ಕೋಟಲೆ ವಿರುದ್ಧ ಸಿಡಿದು ನೀಡಿದ ಫಲಿತಾಂಶ ಎಂಬ ಎಚ್ಚರಿಕೆ ನಮ್ಮಲಿರಬೇಕು. ಇಂದು ಕಾಂಗ್ರೆಸ್‌ಗೆ ಸಿಕ್ಕಿರುವ ೪೨% ಮತಗಳು ಬೆಲೆ ಏರಿಕೆ,ನಿರುದ್ಯೋಗದ ವಿರುದ್ಧ ಎಂದು ಹೇಳಬಹುದು ಎಂದರು.
ಇಂದು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಉದ್ದೇಶಗಳು ಪ್ರಾಮಾಣಿಕ ಇದೆ.ಆದರೆ, ಅವರ ಪಕ್ಷದ ಒಳಗೆ ಇರುವ ನಾಯಕರಲ್ಲಿ ಇಲ್ಲ. ಅಲ್ಲಿ ಸಾಕಷ್ಟು ಇತಿಮಿತಿಗಳಿವೆ . ಆದ್ದರಿಂದ ನಾವು ಎಲ್ಲವೂ ಸರಿಯಾಗಿದೆ ಎಂದು ಮೈ ಮರೆಯಬಾರದು.ಜಾತ್ಯಾತೀತ ಮತ್ತು ಸಂವಿಧಾನ ಒಪ್ಪಿಗೊಂಡವರು ಮಾತ್ರ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದರು.