ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ನಗರ ಪ್ರವೇಶಿಸುವ ಮಣಿಪಾಲ್ ಆಸ್ಪತ್ರೆ ವೃತ್ತದ ರಸ್ತೆ ಮದ್ಯೆ ಟ್ರಾಫಿಕ್ ಸಮಸ್ಯೆಯನ್ನು ಅರಿತ ಸಂಸದ ಪ್ರತಾಪ್ ಸಿಂಹ ಅವರು ಪೊಲೀಸ್ ಹಾಗೂ ಹೈವೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಳಿಗೆ ಈ ವೃತ್ತದಲ್ಲಿ ವಾಹನ ದಟ್ಟಣೆಯಿಂದ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಅರಿತು ಕೇಂದ್ರ ಸರ್ಕಾರದ ಅನುದಾನದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿ ಅನುವು ಮಾಡಿಕೊಡಲಾಗುವುದು ಈ ಕಾರ್ಯವು ಸುಮಾರು 10 ತಿಂಗಳುಗಳ ಅವಧಿ ಬೇಕಾಗಿರುವುದರಿಂದ ಸದ್ಯ ರಸ್ತೆಯ ಇಕ್ಕೆಲಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತಯ ಕಾಮಗಾರಿ ನಡೆಯುವುದರಿಂದ ಸವಾರರು ಚಾಮುಂಡಿ ಬೆಟ್ಟ, ನಂಜನಗೂಡು ತೆರಳುವವರು ಎಡಗಡೆ, ಕೊಡಗು ಇಂದ ಬರುವವರಿಗೆ ಎಡಗಡೆ ತಿರುವಿನಲ್ಲಿ ರಸ್ತೆ ಸೇರುವಂತೆ ಕ್ರಮ ವಹಿಸಲಾಗುವುದು. ಬಿಜೆಪಿಯ ಆಡಳಿತ ಸಂದರ್ಭ
3 ವರ್ಷ 10 ತಿಂಗಳ ಅಧಿಕಾರದಲ್ಲಿ ಕೋವಿಡ್ ನಿರ್ವಹಣೆ, ಅತಿವೃಷ್ಟಿಯಿಂದ ಅಭಿವೃದ್ದಿಯಲ್ಲಿ ಕುಂಠಿತವಾಗಿದೆ.
ಮೈಸೂರು ರಿಂಗ್ ರಸ್ತೆಯು ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಈ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡಲಿ
ನನ್ನ ಅವಧಿಯಲ್ಲಿ ಮೈಸೂರಿಗೆ ಹಲವು ಯೋಜನಗಳನ್ನು ರೂಪಿಸಿದ್ದು, ಅದರಂತೆ ಮೈಸೂರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ತರುವ ಇಚ್ಛೆಯಿಂದ ಹುಯಿಲಾಳು ಗ್ರಾಮದಲ್ಲಿ 28 ಎಕರೆ ಜಾಗ ಗೊತ್ತು ಮಾಡಿದ್ದು, ಈ ಕುರಿತು ಬ್ರಿಜೇಶ್ ಪಾಟೀಲ್ ಅವರೂ ಸಹಕಾರ ನೀಡಿದ್ದು ಕ್ರೀಡಾಂಗಣ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದರು.
ಮೈಸೂರು ಮೆಟ್ರೋ, ಮೊನೊ ರೈಲು ತರುವುದು ಸೇರಿದಂತೆ ನಗರವನ್ನು ಗ್ರೇಟರ್ ಮೈಸೂರು ಮಾಡಬೇಕು ಎಂದು ಕನಸು ಕಂಡಿದ್ದೇನೆ. ಚಾಮುಂಡೇಶ್ವರಿಯ 11 ಗ್ರಾಮಗಳಿಗೆ, ಹೂಟಗಳ್ಳಿ ಸೇರಿದಂತೆ ಹುಣಸೂರಿನ ಹಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಯೋಜನೆ. ಯೋಜನೆಗಳು ಕೇಂದ್ರ ಸರ್ಕಾರದಿಂದ ಹಣ ತರಲಿದ್ದು, ಕಾಂಗ್ರೆಸ್ ಸಹಕಾರ ನೀಡಬೇಕು ಎಂದರು.
ಮೈಸೂರು ಸುತ್ತ ಪೇರಿಪರಲಿ ರಿಂಗ್ ರಸ್ತೆ ಮಾಡಲು ಉದ್ದೇಶಿಸಿದ್ದು, ಈ ಕಾಮಗಾರಿಗೆ ಅಪ್ರುವಲ್ ನೀಡುವುದರ ಜತೆಗೆ
ಈ ಎಲ್ಲ ಯೋಜನೆಗಳಿಗೆ ಕಾಂಗ್ರೆಸ್ ಸಹಕರಿಸಬೇಕು. ಚುನಾವಣೆ ಸಂಧರ್ಭದಲ್ಲಿ ರಾಜಕೀಯ ಮಾಡೋಣ, ಉಳಿದ ಸಂಧರ್ಭದಲ್ಲಿ ಅಭಿವೃದ್ದಿ ಮಾಡೋಣ, ಗ್ಯಾಸ್ ಪೈಪ್ ಲೈನ್ ಗೆ ರಾಜ್ಯ ಸರ್ಕಾರ ಅನುಮತಿ ನೀಡಬೇಕು ಎಂದು ವಿನಂತಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ತಿಳಿಸಿ, ಚುನಾವಣೆಯಲ್ಲಿ ಸೋಲು,ಗೆಲುವು ಸಾಮಾನ್ಯ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ಹಾಗೂ ನಮ್ಮ ಸರ್ಕಾರದ ಹಲವು ಯೋಜನೆಳನ್ನು ಮುಂದುವರೆಸಿಕೊಂಡು ಬಾರದಿದ್ದರಿಂದ ನಮಗೆ ಹಿನ್ನಡೆ ಉಂಟಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯ ಎಚ್ಚರಿಕೆ
ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಪ್ರಮುಖ 5 ಘೋಷಣೆಗಳನ್ನು ಜನರಿಗೆ ತಿಳಿಸಿದ್ದು, ಕ್ಯಾಬಿನೇಟ್‌ನ ಮೊದಲ ಸಭೆಯಲ್ಲೇ ಅವನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದರು. ಆದರೆ ಸರ್ಕಾರ ರಚನೆಯಾಗಿ ಹಲವು ವಾರಗಳೇ ಕಳೆದರೂ ಸಹ ಅವರು ಮತದಾರರ ಭರವಸೆಗಳನ್ನು ಈಡೇರಿಸಿಲ್ಲ.
ಸಿದ್ದರಾಮಯ್ಯ ಅವರೇ ತಿಳಿಸಿರುವಂತೆ 200ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆಯೊಡತಿಗೆ ಮಾಸಿಕ 2 ಸಾವಿರ ರೂ, ಹಾಗೂ ಪದವಿಯೊಂದಿದ ನಿರುದ್ಯೋಗಿಗಳಿಗೆ ತಿಂಗಳಿಗೆ 3 ಸಾವಿರ ರೂ, ಮಹಿಳೆಯರಿಗೆ ಉಚಿತ ಬಸ್ ಸೇವೆ ಸೇರಿದಂತೆ ಹಲವು ಯೋಜನೆಗಳು ಜೂ.1ರಿಂದ ಜನರಿಗೆ ತಲುಪದಿದ್ದರೆ ಕೊಡಗು ಹಾಗೂ ಮೈಸೂರಿನ ಜನರನ್ನು ಒಟ್ಟುಗೂಡಿ ನನ್ನ ನೇತೃದಲ್ಲೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕೈ ಸರ್ಕಾರವನ್ನು ಎಚ್ಚರಿಸಿದರು.
ಸಿದ್ದರಾಮಯ್ಯ ವಿರುದ್ದ ಕಿಡಿ
ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಪುಂಕಾನು ಪುಂಕವಾಗಿ ಸುಳ್ಳಿನ ಕಂತೆಯನ್ನೇ ತೆರೆದಿಟ್ಟು ಮತದಾರರನ್ನು ದಿಕ್ಕು ತಪ್ಪಿಸಿದ್ದಾರೆ. ಪ್ರಣಾಳಿಕೆ ಘೋಷಣೆ ಸಂದರ್ಭದಲ್ಲಿ ಇರದ ನೀತಿ, ನಿಯಮಗಳು ಅವನ್ನು ಜಾರಿಗೊಳಿಸುವಾಗ ಇಲ್ಲ-ಸಲ್ಲದ ನಿಯಮ ರೂಪಿಸುತ್ತಿದ್ದಾರೆ. ಹಿಮಾಚಲ ಪ್ರದೇಶ ಚುನಾವಣೆ ಸಂದರ್ಭ Ops ಜಾರಿಗೆ ತರುವಂತೆ ಘೋಷಿಸಿ ಅಧಿಕಾರಕ್ಕೆ ಬಂದು ಇದುವರೆಗೂ ಅದನ್ನು ಜಾರಿಗೆ ತರಲು ಸಾದ್ಯವಾಗಿಲ್ಲ. ರಾಜ್ಯದ ಮತದಾರರು ಸಿದ್ದರಾಮಯ್ಯ ತಿಳಿಸಿದ ಗ್ಯಾರಂಟಿ ಯೋಜನೆಗಳನ್ನು ನಂಬಿ ಮತ ನೀಡಿದ್ದಾರೆ ಹೊರತು. ಅಭ್ಯರ್ಥಿಗಳನ್ನು ನೋಡಿ ಮತ ನೀಡಿಲ್ಲ. ಪ್ರಜ್ಞಾವಂತ ಮತದಾರರು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕಾಂಗ್ರೆಸ್‌ನಿಂದ ಪೊಲೀಸ್ ಇಲಾಖೆ ದುರ್ಬಳಕೆ
ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರು ಬಾಯಿ ತಪ್ಪಿನಿಂದ ಹಲವು ತಿಂಗಳ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ನಾವು ಸಹ ಖಂಡಿಸುತ್ತೇವೆ. ಆದರೆ ಹಿಂದೆ ನಡೆದಿರುವ ಘಟನೆಗೆ ಪೊಲೀಸ್ ಅಧಿಕಾರಿಗಳನ್ನು ಎದುರಿಸಿ ಮೊನ್ನೆ ಎಫ್‌ಐಆರ್ ದಾಖಲುಮಾಡಿ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಸಿದ್ದರಾಮಯ್ಯ ವೃತ್ತಿಯಿಂದ ವಕೀಲ ರಾದವರು ಮುಖ್ಯಮಂತ್ರಿ ಹುದ್ದೆ ಶಾಸ್ವತವಲ್ಲ ಪೊಲೀಸ್ ಇಲಾಖೆ ಶಾಸ್ವತ ವಾದದ್ದು, ವಿಧಾನ ಸೌದದಲ್ಲಿ ಪೊಲೀಸರಿಗೆ ಧಮ್ಕಿ ಹಾಕಿ ಪ್ರಕರಣ ದಾಖಲಿಸಿದ್ದೀರಿ ಎಂದು ಕಿಡಿಕಾರಿದರು.
ಮೈಸೂರಿನ ಅಭಿವೃದ್ಧಿಗಾಗಿ ನಾನು ಯಾರ ಕಾಲು ಬೇಕಾದರೂ ಹಿಡಿಯುತ್ತೇನೆ.
ಮೈಸೂರು - ಕೊಡಗು ಅಭಿವೃದ್ಧಿಗಾಗಿ ಯಾರ ಕೈ , ಕಾಲು ಬೇಕಾದರೂ ಹಿಡಿಯುತ್ತೇನೆ. ಅಂಗಲಾಚುತ್ತೇನೆ.
ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಉಳಿದ ಸಮಯದಲ್ಲಿ ಅಭಿವೃದ್ಧಿ ರಾಜಕಾರಣ ಮಾಡೋಣ. ಅಭಿವೃದ್ಧಿಯ ಪರ ಇರುವ ವ್ಯಕ್ತಿಯನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕಮಾಡಿ. ಅಭಿವೃದ್ಧಿ ವಿಚಾರದಲ್ಲಿ ನಾನು ಸಿಎಂ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಚರ್ಚಿಸುತ್ತೇನೆ.