ಟಿಪ್ಪು ನಿಜ ಕನಸು ಪುಸ್ತಕಕ್ಕೆ ಮುನ್ನುಡಿ ಬರೆದವರು ವಿದ್ವಾಂಸರೇ?: ಜಗದೀಶ ಕೊಪ್ಪ ಪ್ರಶ್ನೆ

ManjuHamapura
0
ಮೈಸೂರು: ಟಿಪ್ಪು ನಿಜಕನಸುಗಳಿಗೆ ಮುನ್ನಡಿ ಬರೆದ ಸಾಹಿತಿ ಎಸ್.ಎಲ್ ಭೈರಪ್ಪ ವಿದ್ವಾಂಸರೇ ಅಥವಾ ವಿದೂಷಕರೇ  ಎಂದು ಹಿರಿಯ ಸಾಹಿತಿ ಮತ್ತು ಪತ್ರಕರ್ತ ಜಗದೀಶ ಕೊಪ್ಪ ಪ್ರಶ್ನಿಸಿದರು.

ನಗರದ ರೋಟರಿ ಸಭಾಂಗದಲ್ಲಿ ಭಾರತೀಯ ಜನಕಲಾ ಸಮಿತಿಯ (ಇಪ್ಟಾ) 8೦ ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ  ಸಾಂಸ್ಕೃತಿಕ ಲೋಕದ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಚಾರ ಸಂಕಿರಣ ಸಮಾರಂಭದಲ್ಲಿ ಮಾತನಾಡಿದ ಅವರು,200 ವರ್ಷಗಳ ಇತಿಹಾಸವಿರು ಟಿಪ್ಪು ಸುಲ್ತಾನ್ ಬಗ್ಗೆ ಪುಸ್ತಕವೊಂದರಲ್ಲಿ ತಿರುಚಿ ಬರೆದು, ಉರಿಗೌಡ ಮತ್ತು ನಂಜೇಗೌಡ ಎಂಬ ಸುಳ್ಳು  ವ್ಯಕ್ತಿಗಳನ್ನು ಸೃಷ್ಟಿಸಿ  ನಾಟಕ ಪ್ರದರ್ಶನ ಮಾಡಿರುವುದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಬ್ಬರಿಗೂ ಶಿಕ್ಷಣ ಎಷ್ಟು ಮುಖ್ಯವೂ ಅಷ್ಟೇ ಕಲೆ ಮತ್ತು ಸಾಹಿತ್ಯವೂ ಮುಖ್ಯ.ಮನುಷ್ಯನಲ್ಲಿ ವೈಚಾರಿಕ ಪ್ರಜ್ಞೆ ಮೂಡುಸುವಲ್ಲಿ ಕಲೆಗಳು ಪಾತ್ರ ದೊಡ್ಡದು.ಹೀಗಾಗಿ ಪ್ರಾಚೀನ ಕಾಲದಿಂದಲೂ ಮನುಷ್ಯ ಕಲಾ ಪ್ರಕಾರಗಳನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮವಾಗಿ ಬಳಸಿಕೊಂಡಿದ್ದಾನೆ ಎಂದರು.

ಎಡಪಂಥೀಯ ಚಿಂತಕರನ್ನು ಬ್ರಾಹ್ಮಣರ ವಿರೋಧಿ ಎಂದು ಹಣೆಪಟ್ಟಿ ಕಟ್ಟಲಾಗಿದೆ‌.ಆದರೆ, ಎಡಪಂಥೀಯರು ಬ್ರಾಹ್ಮಣ್ಯ ವಾದವನ್ನು ವಿರೋಧಿಸಿದ್ದಾರೆ ಹೊರತು ಬ್ರಾಹ್ಮಣರನ್ನಲ್ಲ.ವಾಸ್ತವದಲ್ಲಿ ಈ ನೆಲದಲ್ಲಿ ಎಡಪಂಥೀಯ ಚಳವಳಿಗೆ ವಾರಸುದಾರರು  ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂದು ಹೇಳಿದರು.
ಹಿರಿಯ ರಂಗಕರ್ಮಿ ಜನಾರ್ಧನ(ಜನ್ನಿ) ಮಾತನಾಡಿ, ಇಪ್ಟಾ ಸಂಘಟನೆ  ದೇಶದಲ್ಲೇ ನಮ್ಮ ದೇಶದ ಕಲೆ‌, ಸಂಸ್ಕೃತಿಯನ್ನು ಪ್ರನಿಧಿಸುವ ಒಂದು ಜನಪರ ಸಾಂಸ್ಕೃತಿಕ ವೇದಿಕೆ .ತಾತ್ವಿಕ ಹಿನ್ನೆಲೆಯಲ್ಲಿ ಸ್ಥಾಪಿತವಾದ ಒಂದು ವೈಚಾರಿಕ ಸಂಘಟನೆ ಎಂದರು.

ಯಾವ  ದೇಶದಲ್ಲಿ ಕಲೆ, ಸಂಸ್ಕೃತಿಗೆ  ಬೆಲೆಯಿಲ್ಲವೂ ಅ ದೇಶ ಎಂದು ಪ್ರಗತಿಯ ಪಥದಲ್ಲಿ‌ ಸಾಗಲಾರದು.ಇಪ್ಟಾ  ಸ್ವಾಭಿಮಾನದ ಸಂಕೇತ. ಶಿಶುನಾಳ ಶರೀಫ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕಾಣಿಕೆ  ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಏರುವಂತೆ ಮಾಡಿತು. ಆದರೆ, ಕೆಲವು ದುಷ್ಟ‌ ಮನಸ್ಸುಗಳು ಅವರನ್ನು ಧಾರ್ಮಿಕವಾಗಿ ತೇಜೋವಧೆ ಮಾಡುತ್ತಾರೆ ಎಂದು ಅಸಮಾಧಾನ ಹಿರ ಹಾಕಿದರು.

ಧರ್ಮ, ಸಂಸ್ಕೃತಿ ಮಾನವೀಯತೆಯನ್ನು ಮಾರಾಟಕ್ಕಿಟ್ಟ ಯಾವುದೇ ದೇಶ ಎಂದಿಗೂ ಉದ್ಧಾರವಾಗಿಲ್ಲ.ಇಂದು ಅಭಿವ್ಯಕ್ತಿ ಸ್ವಾತಂತ್ರ್ಯ ಕುತ್ತು ತಂದಿದ್ದ ಕೋಮುವಾದಿಗಳಿಗೆ ನಾಡಿನ  ಜನರು ಸೂಕ್ತ ಉತ್ತರ ನೀಡಿದ್ದಾರೆ. ಕನ್ನಡಿಗರು ಯಾವಾಗಲೂ ಶಾಂತಿ ಸೌಹಾರ್ದ ಬಯಸುವವರು ಆದ್ದರಿಂದಂದಲೇ ಅವರು ಇಂದು ಸೂಕ್ತಪಾಠ ಕಲಿಸಿದ್ದಾರೆ  ಎಂದರು.
ಸಿಪಿಯ ಹಿರಿಯ ಮುಖಂಡ ಎಚ್.ಆರ್ ಶೇಷಾದ್ರಿ, ಹೆಚ್.ವಿ ರಾಮಕೃಷ್ಣ, ಸಮಿತಿ ಅಧ್ಯಕ್ಷ ಕೆ.ಎಸ್ ರೇವಣ್ಣ  ಇದ್ದರು.




Post a Comment

0Comments
Post a Comment (0)