ಹತ್ತು ದಿನಗಳ ಗುಜರಾತ್ ಕರಕುಶಲ ಉತ್ಸವ

ManjuHamapura
0
ಮೈಸೂರು: ಕರಕುಶಲ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ಮೇ.19 ರಿಂದ 10 ದಿನಗಳ  ಗುಜರಾತ್ ಕರಕುಶಲ ಉತ್ಸವ ಆಯೋಜಿಸಲಾಗಿದೆ ಎಂದು ಗುಜರಾತ್ ಇಂಡೆಕ್ಸ್ಟ್ ಸಿ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಎಂ‌ಶುಕ್ಲ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಗುಜರಾಜ್ ಕರಕುಶಲ ಮೇಳ ವಿಭಿನ್ನವಾಗಿರುತ್ತದೆ.ಮೊದಲೆಲ್ಲ ರಾಜ್ಯದ ಕೆಲವು ಜಿಲ್ಲೆಯ ಕರಕುಶಲ ಕರ್ಮಿಗಳು ಮಾತ್ರ ಈ ಉತ್ಸವದಲ್ಲಿ ಭಾಗವಹಿಸುತಿದ್ದರು.ಆದರೆ ಇಂದು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಕುಶಲಕರ್ಮಿಗಳು ಆಗಮಿಸುತಿದ್ದು, ಸುಮಾರು 80 ಅಧಿಕ ಸ್ಟಾಲ್ಗಳು ಬರಲಿವೆ ಎಂದು ಹೇಳಿದರು.

ಉತ್ಸವದಲ್ಲಿ ಕರಕುಶಲ ಕರ್ಮಮಿಗಳು ತಯಾರಿಸಿದ ಪಟೋಲ್ ಸೀರೆಗಳು, ಬಾಂದಿನಿ ಸೀರೆಗಳು ಕಸೂತಿ ಮಾಡಿದ ಬೆಡ್ ಶೀಟ್ಗಳು, ಟವಲ್ ಗಳು, ಕುಶನ್ ಕವರಮರ್ಗಳು, ಕುರ್ತಿ ಹಾಗೂ ಕೈಮಗ್ಗ ಉತ್ಪನ್ನಗಳ ಪ್ರದರ್ಶನ‌ ಮತ್ತು ಮಾರಾಟ ನಡೆಯಲಿದೆ. ಸಾರ್ಬಜನಿಕರಿಗೆ ಉಚಿತ ಪ್ರವೇಶ ಇರಲಿದೆ ಎಂದು ಹೇಳಿದರು.

ಅಂದು ನಡೆಯುವ ಉತ್ಸವದ ಉದ್ಘಾಟನೆಯನ್ನು ರಾಜ್ಯ  ಖಜಾನೆ ಆಯುಕ್ತ ಡಾ.ಅರುಂಧತಿ ಚಂದ್ರಶೇಖರ್ ನೆರವೇರಿಸಲಿದ್ದಾರೆ.ಜೆಎಸ್ಎಸ್ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ ಮಂಜುನಾಥ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮೈಸೂರು ರೈಲ್ವೆ ವಿಭಾಗದ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಜೆಎಸ್ಎಸ್ನ ರೇವಣ್ಣಸ್ವಾಮಿ,ಡಾ.ಸ್ನೇಹಲ್ ಮಕ್ವಾನ್,ಶಿವನಂಜಸ್ವಾಮಿ,ದಯಾಳ್ ಇದ್ದರು.

Post a Comment

0Comments
Post a Comment (0)