ಮೈಸೂರು: ಎಮ್ಮೆ ಕೋಣಗಳನ್ನು ಕಡಿಯುವುದಾದರೆ ಹಸುಗಳನ್ನು ಏಕೆ ಕಡಿಯಬಾರದು ಎನ್ನುವ ಮೂಲಕ ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಪ್ರಶ್ನಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಮ್ಮೆ ಕೋಣ ಗಳನ್ನು ಕಡಿಯುವುದಾದರೆ ಹಸುವನ್ನು ಏಕೆ ಕಡಿಯಬಾರದು. ಹಾಗಾಗಿ ಈ ಬಗ್ಗೆ ಚರ್ಚೆಗಳಾಗುತ್ತಿದ್ದು ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯ ಬೇಕೆ ಬೇಡವೆ ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ನನ್ನ ಮನೆಯಲ್ಲೇ ನಾಲ್ಕು ಹಸುಗಳನ್ನು ಸಾಕಿದ್ದೆವು. ಅದರಲ್ಲಿ ಒಂದು ಸತ್ತು ಹೋಯಿತು. ಆಗ ಅದನ್ನು ಊಳಲು 25 ಜನ ಬಂದರೂ ಹಾಗಲಿಲ್ಲ. ನಂತರ ಜೆಸಿಬಿ ತರಿಸಿ ಊಳಬೇಕಾಯಿತು. ಹಾಗಾಗಿ ಗೋ ಹತ್ಯೆ ನಿಷೇಧ ಕಾನೂನಿನ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಒಟ್ಟಿನಲ್ಲಿ ರೈತರಿಗೆ ಅನುಕೂಲವಾಗುವ ರೀತಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಹೈನುಗಾರಿಕೆ ಬಲಿಷ್ಠಗೊಂಡಿದ್ದು, ಜನ ಹೆಚ್ಚು ಹೆಚ್ಚು ಹೈನುಗಾರಿಕೆಗೆ ಅವಲಂಬಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಹೈನುಗಳಿಗೆ ಸೂಕ್ತ ಚಿಕಿತ್ಸೆಯ ಅಗತ್ಯತೆ ಇದೆ. ಪಶುಸಂಗೋಪನಾ ಇಲಾಖೆ ಬಹಳ ದೊಡ್ಡ ಇಲಾಖೆ.ರಾಜ್ಯದಲ್ಲಿ 4600 ಪಶು ವೈದ್ಯ ಆಸ್ಪತ್ರೆಗಳಿವೆ. ಇಲ್ಲಿ ವೈದ್ಯರು ಸೇರಿದಂತೆ 18 ಸಾವಿರ ಸಿಬ್ಬಂಧಿಗಳ ಅವಶ್ಯಕತೆ ಇದೆ. ಆದರೆ ನಮಗೆ ವೈದ್ಯರು ಸೇರಿದಂತೆ 9 ಸಾವಿರ ಸಿಬ್ಬಂದಿಗಳಷ್ಟು ಮಾತ್ರ ಇದ್ದಾರೆ.