ನೂರಕ್ಕೆ ನೂರು ಗ್ಯಾರಂಟಿ ಯೋಜನೆ ಜಾರಿ: ವೀರಪ್ಪಮೊಯ್ಲಿ

ManjuHamapura
0
ಮೈಸೂರು: ನೂರಕ್ಕೆ ನೂರು ಪಾಲು ಗ್ಯಾರಂಟಿಗಳ ಅನುಷ್ಠಾನ ಆಗುತ್ತದೆ. ಅದಕ್ಕೆ ವಿರೋಧ ಪಕ್ಷಗಳಿಗೆ ಅವಸರ ಏಕೆ. ಅವರು ಪೂರ್ಣ ಪ್ರಮಾಣದ ಸರ್ಕಾರವನ್ನೇ ರಚಿಸಲಿಲ್ಲ. ಆದರೆ, ಕಾಂಗ್ರೆಸ್‌ ಪೂರ್ಣ ಸರ್ಕಾರ ರಚಿಸಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ ಹೇಳಿದರು.  

ಮೈಸೂರಿನ ರೈಲು ನಿಲ್ದಾಣದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಜೂ.1 ರಿಂದ ಹೋರಾಟ ನಡೆಸಲು ಹೊರಟಿರುವ ಬಿಜೆಪಿ ನಡೆಯ ಬಗ್ಗೆ ಪ್ರತಿಕ್ರಯಿಸಿ, ಬಿಜೆಪಿಯವರಿಗೆ ಬೇರೆ ಕಸುಬು ಇಲ್ಲ. ಅವರ ಕೆಲಸ ಅವರು ಮಾಡಲಿ ಬಿಡಿ. ಇನ್ನೂ ಪಾಪ  ಕುಮಾರಸ್ವಾಮಿ ಅವರಿಗೆ ಕರೆಂಟ್‌ ಬಿಲ್‌ ಕಟ್ಟಬೇಡಿ ಎಂದು ಕಾಂಗ್ರೆಸ್‌ ಯಾವುದೇ ಗ್ಯಾರಂಟಿಯನ್ನೂ ಕೊಟ್ಟಿಲ್ಲ. ಜನರಿಗೆ ಎಲ್ಲವೂ ಗೊತ್ತಿದೆ. ಹೀಗಾಗಿ ಜನರ ಸ್ಪಂದನೆಯೂ ಸಿಗಲಿದೆ. ಸರ್ಕಾರ ಗ್ಯಾರಂಟಿ ಮಾಡಿರುವುದು ಪಕ್ಷವಲ್ಲ. ಹೀಗಾಗಿ ಕೆಲವೊಂದು ನಿಯಮಗಳಾನುಸರ ಅನುಷ್ಠಾನ ಆಗಲಿದೆ ಎಂದರು.  

ಸಿಎಂ ಸ್ಥಾನ ಹಂಚಿಕೆ ವಿಚಾರ ಪ್ರಶ್ನೆಗೆ ಅದೆಲ್ಲಾ ನಿಮಗೆ ಏಕೆ? ಅದೆಲ್ಲಾ ಚರ್ಚೆಯೇ ಇಲ್ಲ. ಪೂರ್ಣ ಪ್ರಮಾಣದ ಸರ್ಕಾರವಿದೆ. ಬಿಜೆಪಿ ಯಾವುದೇ ಅನುಷ್ಠಾನ ಮಾಡಿಲ್ಲ. ಕಾಂಗ್ರೆಸ್‌ ಸರ್ಕಾರ ಅದೆಲ್ಲವನ್ನೂ ಮಾಡಲಿದೆ. ಇನ್ನೂ ಅನೇಕರಿಗೆ ಸ್ಥಾನ ಸಿಗದಿರುವ ಕುರಿತು ಹೈಕಮಾಂಡ್‌ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು. ಸಂವಿಧಾನದ ಅಡಿಯಲ್ಲಿರುವ ಸಚಿವ ಸ್ಥಾನವನ್ನು ಕಾಂಗ್ರೆಸ್‌ ಭರ್ತಿ ಮಾಡಿದೆ. ಮುಂದೆಯೂ ಸರ್ಕಾರ ಸುಭದ್ರವಾಗಿ ನಡೆಯಲಿದೆ ಎಂದು ತಿಳಿಸಿದರು. ಮಾಜಿ ಶಾಸಕ ವಾಸು ಇದ್ದರು.

Post a Comment

0Comments
Post a Comment (0)