ದೇಶ ವಿಭಜನೆ ತಡೆಗೆ ಯುಸಿಸಿ ಅಗತ್ಯ: ಜೆ.ನಂದಕುಮಾರ್

ManjuHamapura
0
ಮೈಸೂರು: ದೇಶ ವಿಭಜನೆ ತಡೆಯಲು ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಅಗತ್ಯ ಎಂದು ಜೆ. ನಂದಕುಮಾರ್ ಅಭಿಪ್ರಾಯಪಟ್ಟರು.

ನಗರದ ಜೆಎಲ್ಬಿ ರಸ್ತೆಯ ರೋಟರಿ ಸಭಾಂಣದಲ್ಲಿ ರ್ಪ್ರಜ್ಞಾ ಪ್ರವಾಹ  ಸ‌ಂಘಟನೆ ವತಿಯಿಂದ ಆಯೋಜಿಸಿದ ವಿಚಾರ ಸಂಕಿರಣದಲ್ಲಿ  ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಏಕೆ ಅಗತ್ಯ ಎಂಬ ವಿಷಯ ಕುರಿತು ಮಾತನಾಡಿದ ಅವರು, 

ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೆಲ ಶ್ರೀಮಂತ ಮುಸ್ಲಿಂ ಮೂಲಭೂತವಾದಿಗಳು ನಾಮಕಾವಸ್ತೆ ಸೋಶಿಯಲಿಸ್ಟ್ ನೆಹರು ಹಾಗೂ ಕಮ್ಯುನಿಸ್ಟ್ ರ ಸಹಾಯ ಪಡುಕೊಂಡು ದೇಶದಲ್ಲಿ ಷರಿಯತ್ ಕಾನೂನು ಜಾರಿಗೆ ಮುಂದಾಹಿದ್ದರು ಎಂದು ಆರೋಪಿಸಿದರು.

ಸಾಮಾನ್ಯ ಮುಸ್ಲಿಂ ಜನರಿಗೆ ಈ ಷರಿಯತ್ ಕಾನೂನು ಬೇಡವಾಗಿದೆ.ಆದರೆ,ಕೆಲವು ಮೂಲಭೂತವಾದಿಗಳು ಇವರನ್ನು ದಾರಿ ತಪ್ಪಿಸುವ ಕೆಲಸ ಮಾಡತಿದ್ದಾರೆ.ಸಾಮಾನ್ಯ ಮುಸ್ಲಿಂರು ಈ ನೆಲದ ಸ್ಥಳಿಯ ಕಾನೂನು ಅನುಸರಿಸುತ್ತಾ ಬಂದಿದ್ದಾರೆ.ಅಲ್ಲದೇ ಸಂವಿಧಾನದ 44ನೇ ವಿಧಿಯಲ್ಲಿಯೂ ಯುಸಿಸಿ ಜಾರಿಗೆ ಅವಕಾಶವಿದೆ.ಅಂಬೇಡ್ಕರ್ ಹಾದಿಯಾಗಿ ಅನೇಕರು ಸಂವಿಧಾನ ಸಭೆಯಲ್ಲಿ ಯುಸಿಸಿ ಬಗ್ಗೆ ಮಾತನಾಡಿದ್ದಾರೆ ಎಂದರು‌.

ಕೆಲ ನಕಲಿ ರಾಷ್ಟ್ರೀಯವಾದಿಗಳು ಯುಸಿಸಿ ಜಾರಿ ಬಗ್ಗೆ ವಿರೋಧ ವ್ಯಕ್ತಪಡಿಸುತಿದ್ದಾರೆ.ಅವರ್ಯಾರಿಗೂ ಷರಿಯತ್ ಕಾನೂನು ಬಗ್ಗೆ ಸರಿಯಾಗಿ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹ ಸಂಯೋಜಕ ಪ್ರಜ್ಞಾ ಪ್ರವಾಹ ರಘುನಂದನ,ರೋಟರಿ ಮೈಸೂರು ಅಧ್ಯಕ್ಷ  ಅರುಣ್ ಬೆಳವಾಡಿ, ರೋಟರಿ ಕಾರ್ಯದರ್ಶಿ ವೆಂಕಟೇಶ್ ಹಾಗೂ ಇತರರು ಇದ್ದರು.

Post a Comment

0Comments
Post a Comment (0)