ಕೈರೋ: ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಶನಿವಾರ ಕೈರೋಗೆ ಆಗಮಿಸಿದರು. 26 ವರ್ಷಗಳ ನಂತರ ಮೊದಲ ದ್ವಿಪಕ್ಷೀಯ ಭೇಟಿಗಾಗಿ ಪ್ರಧಾನಿ ಮೋದಿ ಈಜಿಪ್ಟ್'ಗೆ ಆಗಮಿಸಿದ್ದಾರೆ.
ಕೈರೋ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನ ವಿಶೇಷ ಗೌರವದಿಂದ ಈಜಿಪ್ಟ್ ಪ್ರಧಾನಿ ಸ್ವಾಗತಿಸಿದರು. ಅವರ ಆಗಮನದ ನಂತರ, ಪ್ರಧಾನಿಗೆ ಗೌರವ ರಕ್ಷೆ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಈಜಿಪ್ಟ್ ಪ್ರಧಾನಿ ಮುಸ್ತಫಾ ಮಡ್ಬೌಲಿ ಆತ್ಮೀಯವಾಗಿ ಬರಮಾಡಿಕೊಂಡರು. ಕೈರೋಗೆ ಆಗಮಿಸಿದ ಮೋದಿ ಅವ್ರಿಗೆ ವಿಶೇಷ ಗೌರವ ನೀಡಲಾಯ್ತು.