ಆರ್.ಮೂರ್ತಿಗೆ MLC ಮಾಡುವಂತೆ ಮನವಿ

ManjuHamapura
0
ಮೈಸೂರು: ರಾಜಕೀಯವಾಗಿ ಹಿಂದುಳಿದ ನೇಕಾರ ಸಮುದಾಯದ ನಗರ ಕಾಂಗ್ರೆಸ್ ಅಧ್ಯಕ್ಷ ಆರ್ ಮೂರ್ತಿ ಅವರನ್ನು ವಿಧಾನಪರಿಷತ್ ಸದಸ್ಯನ್ನಾಗಿ ನೇಮಕ‌‌ ಮಾಡಬೇಕು ಎಂದು ಜಿಲ್ಲಾ ನೇಕಾರ ಸಮಯದಾಯಗಳ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತ ಭವನದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ‌‌ ಕಾರ್ಯದರ್ಶಿ ನರಸಿಂಹ ಮೂರ್ತಿ ಅವರು ಮಾತನಾಡಿ, ಮೂರ್ತಿ ಅವರು ಕಳೆದ 40 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಾ ಬಂದಿದ್ದಾರೆ.ಅಲ್ಲದೇ ಇಂದು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಅವರು ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ.

 ವಿಧಾನಸಬಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಸಿಗಲು ಅವರು ದುಡಿಮೆಯು ಹೆಚ್ಚಿದೆ.ಮೂರ್ತಿ ಅವರಿಗೆ ಎಂಎಲ್ಸಿ ಮಾಡುವುದರಿಂದ ಸಮುದಾಯಕ್ಕೆ ಮತ್ತಷ್ಟು ರಾಜಕೀಯ ಬಲಸಿಗಲಿದೆ.ಈ ವಿಷಯವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
 
ಒಕ್ಕೂಟದ ಕಾರ್ಯದರ್ಶಿಗಳಾದ ಹೇಮಣ್ಣ, ರಾಜಣ್ಣ, ಸಂಘಟನ ಕಾರ್ಯದರ್ಶಿ ದಿವಾಕರ್ ಎಸ್, ಸುನೀಲ್ ಇದ್ದರು.

Post a Comment

0Comments
Post a Comment (0)