ಜೂ. 9 ಕ್ಕೆ ದರ್ಬಾರ್ ತೆರೆಗೆ

ManjuHamapura
0
ಮೈಸೂರು: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ರಾಜಕೀಯ ವಿಡಂಬನಾತ್ಮಕ ಕಥಾಹಂದರ ಹೊಂದಿರುವ ಕನ್ನಡ ಸಿನಿಮಾ `ದರ್ಬಾರ್ ಜೂ.9ಕ್ಕೆ ತೆರೆ ಕಾಣಲಿದೆ ಎಂದು ಸಿನಿಮಾದ ನಿರ್ದೇಶಕ, ಸಂಗೀತ ನಿರ್ದೇಶಕ ವಿ.ಮನೋಹರ್ ತಿಳಿಸಿದರು.  
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಹಾಸ್ಯಮಯವಾಗಿದ್ದು, ಅತ್ಯುತ್ತಮ ಸಂದೇಶ ರವಾನಿಸಲಿದೆ. ಸತೀಶ್ ನಾಯಕ ನಟರಾಗಿ ಹಾಗೂ ಜಾಹ್ನವಿ ನಾಯಕ ನಟಿಯಾಗಿ ಸಿನಿಮಾದಲ್ಲಿ ಅಭಿನಯಿಸಿದ್ದು, ನಾನು ತುಂಬ ವರ್ಷಗಳ ನಂತರ ನಿರ್ದೇಶನ ಮಾಡಿದ ಸಿನಿಮಾ ಇದಾಗಿದೆ ಎಂದರು. ಸಿನಿಮಾದ ನಾಯಕ ನಟ ಸತೀಶ್, ಕಲಾವಿದರಾದ ರಾಜಗುರು ನಾಗೇಂದ್ರ, ಜಯರಾಮ್, ಶಿವು ಬಾಲಾಜಿ, ಬಸವರಾಜಗೌಡ, ಶಂಕರ್, ಮಂಜುನಾಥ್ ಗೋಷ್ಠಿಯಲ್ಲಿದ್ದರು.

Post a Comment

0Comments
Post a Comment (0)